ಚಿತ್ರ: ನಾ ಮೆಚ್ಚಿದ ಹುಡುಗ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಗಾಯಕರು: ಎಸ್.ಜಾನಕಿ
ಸಂಗೀತ: ವಿಜಯಭಾಸ್ಕರ್

ಆ....ಆ......
ಮಂಗಳದಾ ಈ ಸುದಿನ ಮಧುರವಾಗಲೀ
ನಿಮ್ಮೊಲವೇ ಈ ಮನೆಯಾ ನಂದಾದೀಪವಾಗಲೀ..||೨||...||ಪಲ್ಲವಿ||

ಅನುರಾಗದ ರಾಗಮಾಲೆ ನಿಮ್ಮದಾಗಲೀ
ಅಪಸ್ವರದಾ ಛಾಯೆಯೆಂದು ಕಾಣದಾಗಲೀ..||೨||
ಶೃತಿಯೊಡನೇ ಸ್ವರತಾನ ಲೀನವಾಗಲೀ
ಶುಭಗೀತೆ ಮಿಡಿಯಲೀ....||ಮಂಗಳದಾ||

ತಂದೆತಾಯಿ ದಾರಿತೋರೋ ಕಣ್ಣುಗಳೆರಡೂ
ಅವರ ಪ್ರೇಮ ದೂರವಾಗೆ ಮಕ್ಕಳು ಕುರುಡೂ..||೨||
ಮಮತೆ ಇರುವ ಮನೆಯೆ ಸದಾ ಜೇನಿನ ಗೂಡೂ
ಅದೇ ಶಾಂತಿಯ ಬೀಡೂ....||ಮಂಗಳದಾ||

category: ಕನ್ನಡ ಚಿತ್ರಸಾಹಿತ್ಯ
category: ನಾ ಮೆಚ್ಚಿದ ಹುಡುಗ ಚಿತ್ರ
category: ಆರ್.ಎನ್.ಜಯಗೋಪಾಲ್ ಸಾಹಿತ್ಯ
category: ಎಸ್.ಜಾನಕಿ ಗಾಯನ